ಆರನೇ ವಿಕ್ರಮಾದಿತ್ಯನು ಕಲ್ಯಾಣಿ ಚಾಲುಕ್ಯ ರಾಜವಂಶದ‌ ಪ್ರಖ್ಯಾತ ಮತ್ತು ಪರಾಕ್ರಮಿ ದೊರೆ. ಇವನು ತನ್ನ ಅವಧಿಯಲ್ಲಿ ಶಾಲಿವಾಹನ ಶಕೆಯನ್ನು ರದ್ದು ಮಾಡಿ ತನ್ನದೇ ಆದ ವಿಕ್ರಮ ಶಕೆಯನ್ನು ಆರಂಭಿಸುತ್ತಾನೆ. ಇದು ಚಾಲುಕ್ಯ-ವಿಕ್ರಮ ಶಕೆ ಎಂದು ಪ್ರತೀತಿ ಪಡೆಯಿತು. ಇವನ ಆಳ್ವಿಕೆಯ ಕಾಲ ಕ್ರಿ.ಶ.೧೦೭೬-೧೧೨೬. ಈ ೫೦ ವರುಷಗಳು ಇಡಿಯ ಕಲ್ಯಾಣಿ ಚಾಲುಕ್ಯರ ವಂಶಾವಳಿಯಲ್ಲಿ ಅತ್ಯಂತ ಧೀರ್ಘ ಆಳ್ವಿಕೆ. ಈ ೬ನೇ ವಿಕ್ರಮಾದಿತ್ಯನು ತ್ರಿಭುವನಮಲ್ಲನೆಂದು ಬಿರುದಾಂಕಿತನಾಗಿದ್ದನು. ವಿಜಯನಗರ ಸಾಮ್ರಾಜ್ಯದ ಪೂರ್ವಕಾಲದಲ್ಲಿ ದೊರೆತ ಅತಿ ಹೆಚ್ಚು ಶಾಸನಗಳನ್ನು ಇವನ ಆಳ್ವಿಕೆಯಲ್ಲಿ ಬರೆಸಲ್ಪಟ್ಟಿವೆ. ಈ ದೊರೆ ವಿಕ್ರಮಾದಿತ್ಯನು ಕಲೆ ಮತ್ತು ಸಂಸ್ಕೃತಿಯ ಪೋಷಣೆಗೆ ಗಮನಾರ್ಹನು.ಇವನ ಆಸ್ಥಾನ ಕನ್ನಡ ಮತ್ತು ಸಂಸ್ಕೃತ ಕವಿ, ಪಂಡಿತರಿಂದ ವಿಜೃಂಭಿಸುತ್ತಿತ್ತು. 6ನೇ ವಿಕ್ರಮಾಧಿತ್ಯ ಜೀವನ ಮತ್ತು ಸಾಧನಗಳು == ಚಿತ್ರ ಮಾಹಿತಿ == == ಇವನ್ನೂ ನೋಡಿ == ಚಾಲುಕ್ಯ ಪುಲಕೇಶಿ 2 == ಆಕರ == == ಉಲ್ಲೇಖಗಳು ==